ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

2019 ಕ್ರಿಕೆಟ್ ವಿಶ್ವಕಪ್ ಗೆ ಸ್ಫೋಟಕ ಬ್ಯಾಟ್ಸಮನ್ ಯುವಿ ಕಮ್ ಬ್ಯಾಕ್!

ತೀವ್ರ ಕುತೂಹಲ ಕೆರಳಿಸಿರುವ 2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಕಮ್ ಬ್ಯಾಕ್ ಮಾಡುವ ಗುರಿ ಹೊಂದಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 9 Jan 2019, 4:50 am
ಕೋಲ್ಕತಾ: ತೀವ್ರ ಕುತೂಹಲ ಕೆರಳಿಸಿರುವ 2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಕಮ್ ಬ್ಯಾಕ್ ಮಾಡುವ ಗುರಿ ಹೊಂದಿದ್ದಾರೆ.
ಈ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಸ್ವತಃ ಯುವರಾಜ್ ಸಿಂಗ್ ಮಾತನಾಡಿದ್ದು, 2019ರ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾ ವಾಪಾಸ್ಸಾಗಲು ಯುವಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಯುವಿ ಕಠಿಣ ಪ್ರಯತ್ನ ಆರಂಭಿಸಿದ್ದಾರೆ.  ಐಪಿಎಲ್ ಮೂಲಕ ಮತ್ತೆ ಟೀಂ ಇಂಡಿಯಾಗೆ ಆಯ್ಕಯಾಗೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ ನಾನು ವಿದಾಯ ಹೇಳಿದ ಮೇಲೆ ನೋವು ಕಾಡುತ್ತಿರಬಾರದು. ಇದಕ್ಕಾಗಿ ಶ್ರೇಷ್ಠ ಮಟ್ಟದಲ್ಲೇ ವಿದಾಯ ಹೇಳಲು ಇಚ್ಚಿಸುತ್ತೇನೆ. ರಣಜಿ ಬಳಿಕ ಐಪಿಎಲ್ ಟೂರ್ನಿಯಿದೆ. ಟಿ20 ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 2019ರ ವಿಶ್ವಕಪ್ ಟೂರ್ನಿಗೆ ಕಮ್ ಬ್ಯಾಕ್ ಮಾಡೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ಕೋಟಿ ರೂಪಾಯಿ ನೀಡಿ ಯುವರಾಜ್ ಸಿಂಗ್ ರನ್ನು ಖರೀದಿಸಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement